ನಮ್ಮೂರ ಹಮ್ಮೀರ' - ಇದು 1990ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರವಾಗಿದ್ದು ಪೇರಾಲ ಅವರು ನಿರ್ದೇಶಿಸಿದ್ದಾರೆ. ಚಿತ್ರಕಥೆಯು ವಿಜಯ ಬಾಪಿನೀಡು ಅವರದು. ಇದು "ಅಮ್ಮನ್ ಕೋವಿಲ್ ಕಿಳಕಲೆ" ಎಂಬ 1986ರ ತಮಿಳು ಚಿತ್ರದ ರೀಮೇಕ್ ಆಗಿದ್ದು 1988ರಲ್ಲಿ ತೆಲುಗಿನಲ್ಲಿ "ಖೈದಿ ನಂ. 786" ಎಂಬ ಹೆಸರಿನಿಂದ ರೀಮೇಕ್ ಆಗಿತ್ತು. ಈ ಚಿತ್ರದಲ್ಲಿ ಅಂಬರೀಶ್, ಸುಮನ್ ರಂಗನಾಥ್, ದೇವರಾಜ್ ಮತ್ತು ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿ. ಎಚ್. ಬುಚ್ಚಿ ರೆಡ್ಡಿ ನಿರ್ಮಾಣದ ಈ ಚಿತ್ರವು ಹಂಸಲೇಖ ಅವರ ಗೀತೆಗಳಿಂದಾಗಿ ಮತ್ತು ಪ್ರಮುಖ ನಟರ ಅಭಿನಯಗಳಿಂದಾಗಿ ವ್ಯಾಪಕ ಮೆಚ್ಚುಗೆ ಗಳಿಸಿತ್ತು. == ಪಾತ್ರವರ್ಗ == == ಹಿನ್ನೆಲೆ ಸಂಗೀತ == ಹಂಸಲೇಖ ಅವರು ಚಿತ್ರದ ಸಂಗೀತವನ್ನು ಸಂಯೋಜಿಸಿದ್ದರು. ಅದಕ್ಕೆ ಅಪಾರ ಜನಮನ್ನಣೆ ದೊರಕಿತು. ಚಿತ್ರದ ಸಂಗೀತವನ್ನು ಲಹರಿ ಮ್ಯೂಸಿಕ್ ಸಂಸ್ಥೆಯು ಬಿಡುಗಡೆ ಮಾಡಿತು.